Stories for kids Blog

Kannada Children stories

ಕನ್ನಡದಲ್ಲಿ ಮಕ್ಕಳ ಕತೆಗಳು..ಬನ್ನಿ …ಓದಿ!

ಹಾಸ್ಯ ಮತ್ತು ಸಾಹಸ ಪ್ರಧಾನ ಕತೆಗಳು…ನನ್ನ ಮಕ್ಕಳು ಚಿನ್ಮಯ್ ಮತ್ತು ಸನ್ಮತಿಯ ಸ್ಪೂರ್ತಿಯಿಂದ!

೧. ತೆನಾಲಿ ರಾಮ ಮತ್ತು ಗೆಳೆಯರು ಅಂದ್ರೆ ಯಾರು? ಒಂದು ಪರಿಚಯ…


ನಮ್ಮ ಹುಡುಗ  ಪಾಪ ಬಡ ಬ್ರಾಹ್ಮಣನ ಮನೆಯ ಒಬ್ಬ ಭೋಳೆ ಹುಡುಗ.
ಅವನಿಗೆ ತಕ್ಕ ಗೆಳೆಯರೆಂದರೆ- ಪೆದ್ದ ಗುಂಡ, ಡುಮ್ಮಣ್ಣಕ್ಕ ರೆಡ್ಡಿ, ಕಡ್ಡಿ ಗೌಡ,
ಹೆಸರಿಗೆ ತಕ್ಕಂತೆ ಅವರೋ ಒಬ್ಬೊಬ್ಬರು ಒಂದೊಂದು ತರಹ ವಿಚಿತ್ರ ಶಿಖಾಮಣಿಗಳು.

ಏನೇ ಆದರೂ ಇವರಿಷ್ಟು ಜನರಿಗೂ ಒಂದಲ್ಲಾ ಒಂದು ಸಾಹಸ ಮಾಡಲೇ ಬೇಕೆಂಬ ಹೆಬ್ಬಯಕೆ.
ಅದರಲ್ಲೂ ದೇಶದ್ರೋಹಿಗಳನ್ನು ಹಿಡಿದು ಮಟ್ಟ ಹಾಕುವುದೆಂದರೆ ಇವರಿಗೆ ಇನ್ನಿಲ್ಲದ ಹುಮ್ಮಸ್ಸು.

ಒಮ್ಮೆ ಇವರುಗಳೆಲ್ಲ ರಜಾ ಬಂದಿದೆಯೆಂದು ಊರಿಗೆ ಹೊರಟರು.
ಆಗ ರಸ್ತೆಯಲ್ಲಿ ಒಂದು ಮಂಗಳೂರಿನ ನವರ ಹೋಟೆಲ್ ಇತ್ತು. ಹೊಟ್ಟೆ ಹಸಿದ ಮಕ್ಕಳು ಅಲ್ಲಿಗೆ ಹೋಗಿ ಕುಳಿತುಕೊಂಡವು.


ಅಲ್ಲಿಗೆ  ಜನಾರ್ಧನ ಭಟ್ಟನು ಆರ್ಡರ್ ತೆಗೆದುಕೊಳ್ಳಲು ಬಂದು ನಿಂತು
” ನಿಮಗೆ ಏನು ಬೇಕೂಂಟು..ಹೌದು?” ಎನ್ನಲು ಪೆದ್ದ ಗುಂಡನು ಕಿಸಕ್ಕನೆ ನಕ್ಕನು.


” ತಿಂಡಿ ಉಂಟೆ ಮಾರಾಯರೆ” ಎಂದು ತೆನಾಲಿಯು ಕೇಳಲು
” ಉಪ್ಪಿಟ್ಟುಂಟು, ದೋಸೆ, ಇಡ್ಲಿ…”ಎಂದು ಉದ್ದವಾದ ಲಿಸ್ಟೇ ಹೇಳಲು ಪೆದ್ದ ಗುಂಡನು,

“ಸಾರ್, ಮತ್ತೆ ಮತ್ತೆ ಊಊ…ನಿಮ್ ಹೋಟೆಲ್ನಲ್ಲಿ ಉಪ್ಪಿಟ್ಟಿಗೆ ಸಕ್ಕರೆ ಹಾಕಿ ಕೊಡ್ತೀರಾ” ಎನ್ನುವುದೇ?
” ಏಐ..ಇಲ್ಲ ಹೊಗ್ರೀ ಪಾ” ಎಂದನು ಭಟ್ಟ ಹುಬ್ಬೇರಿಸುತ್ತಾ

ಮತ್ತೆ ಪೆದ್ದಗುಂಡನು,” ಸ್ವಾಮಿ, ಹೋಗ್ಲಿ.. ನಿಂ ಹೋಟೆಲ್ನಲ್ಲಿ ದೋಸೆಗೆ ಚಟ್ನಿನಲ್ಲಿ ಬೆಲ್ಲ ಹಾಕ್ತೀರಾ?” ಅನ್ನಬೇಕೆ?


ಭಟ್ಟನು ನಗುತ್ತಾ ” ಇಲ್ಲಪ್ಪಾ ಇಲ್ಲ” ಎಂದನು
ಪಟ್ಟು ಬಿಡದ ಪೆ. ಗುಂ, ಮತ್ತೆ, ” ಇಡ್ಲಿಗೆ ಜ್ಯಾಮು ಹಾಕಲ್ವೇ” ಎನ್ನಬಹುದೆ?
ಮಕ್ಕಳೆಲ್ಲಾ ಬಿದ್ದು ಬಿದ್ದೂ ನಗುತ್ತಿವೆ ಇವನ ಮೂರ್ಖತನಕ್ಕೆ!

ಭಟ್ಟನ ಮುಖ ಕೆಂಪಗಾಯಿತು ನೋಡಿ…


” ನಿಮ್ಗೆ ತಿಂಡಿ ಗಿಂಡಿ ಏನೂ ಇಲ್ಲಾ..ಕಾಫಿ, ಟೀ ಕುಡಿದು ಎದ್ದೋಗಿ” ಅಂದರೆ,
ಪೆದ್ದಗುಂಡನೂ ಕೋಪ ಮಾಡಿ ಕೊಂಡು,

” ಓ..ಹಾಗಾದರೆ ನಿಮ್ ಕಾಫಿಗೆ ಉಪ್ಪಾದರೂ ಹಾಕಿ ಕೊಡಿ” ಎಂದುಬಿಟ್ಟ.

ಇಂತಾ ಹುಡುಗರ ಸಹವಾಸ ತಮಾಶೆಯಾಗಿರದೆ ಮತ್ತೇನು ಅಲ್ಲವೇ?

೨. ವಿಜಯ್-ವಿಕ್ರಮ್ ಸಾಹಸಗಳು-ಒಂದು ಸಣ್ಣ ಪರಿಚಯ

ಇಬ್ಬರು ಯುವಕರಿದ್ದಾರೆ ನಮ್ಮೂರಿನಲ್ಲಿ>> ಅಣ್ಣ- ತಮ್ಮಂದಿರು…ಹೆಸರು- ವಿಜಯ್ ಮತ್ತು ವಿಕ್ರಮ್ ಅಂತಾ…ನಿಜವಾಗಲೂ ಹೇಳಿದರೆ, ಇವರಿಬ್ಬರೂ ಕ್ಯಾಪ್ಟನ್ ಖನ್ನಾ ಎಂಬ ಸಿ. ಐ. ಡಿ. ದಳದ ಮುಖ್ಯಸ್ಥರ ಕೈ ಕೆಳಗೆ ಪತ್ತೇದಾರರು.


ಇವರಿಬ್ಬರೂ ಹಲವು ದೇಶದ್ರೋಹಿಗಳನ್ನು ಹಿಡಿದು ಒಳಗೆ ಅಟ್ಟಿದ ಕತೆಗಳೆ ತುಂಬಾ ರೋಮಾಂಚಕ…


ಮುಂದೆ ಓದಿ ನೋಡಿ…

ವಿಜಯ್ ವಿಕ್ರಮ್ ಸಾಹಸ ಗಳು

ವಿಜಯ್ ವಿಕ್ರಮ್ ಸಾಹಸ ಗಳುವಿಜಯ್ವಿಕ್ರಮ್ ಸಾಹಸಗಳು:


ಅಧ್ಯಾಯ : ಖದೀಮನಾದ ಜಾವೆದ್ ಮಿಯ ಎಂಬವನು ಆಗಾಗ ಮೈಸೂರಿಗೆ ಬಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಡಿನಂತಹ ಸ್ಥಳದಲ್ಲಿ ಒಂದು ಬಿಕೋ ಎನ್ನುವಂತಾ ಬಂಗಲೆಯಲ್ಲಿ ಇಳಿದುಕೊಳ್ಳುತ್ತಿದ್ದುದು ಕ್ಯಾಪ್ಟನ್ ಖನ್ನಾಗೆ ತಿಳಿದುಹೋಗಿತ್ತು.

ಆದರೆ ಹುಡುಗರಿಗೆ ವಿಷಯ ತಿಳಿದಿದ್ದು ಮೊನ್ನೆ ಮೊನ್ನೆ ತಾನೆ. ಆದರೆ ಈಗ ತಾನೆ ಹೇಳಿದ ಪ್ರಕಾರ ಖದೀಮರೆಲ್ಲ ವರುಶಕ್ಕೆ ಒಮ್ಮೆ ಮಾತ್ರ ಬಕ್ರೀದ್ ನಂತರ ಊರಿನಲ್ಲಿ ಎಲ್ಲೆಲ್ಲಿ ಲೂಟಿ ಮಾದಬೇಕು ಮತ್ತು ಯಾವಾಗ ಎಲ್ಲಿ ದರೋಡೆ ಮಾಡಬೇಕು ಅಂತೆಲ್ಲ ಇವರ ಪ್ಲಾನಿಂಗ್ ಮಾಡ್ಕೊತ್ತಿದ್ದರು ಅಂತೆ

ಇತ್ತೀಚೆಗೆ ಇವರು ಕೆಲವು ಪಾಕೀ ಉಗ್ರವಾದಿಗಳ , ಭಯೋತ್ಪಾದಕ ಸಹವಾಸವನ್ನೂ ಮಾಡಿ ದೇಶದ್ರೋಹಿಗಳೆ ಆಗಿಬಿಟ್ಟಿದ್ದರು ಅಂತಾನೂ ಡಿಪಾರ್ಟ್ಮೆಂಟ್ ಗೆ ಗುಮಾನಿ ಇತ್ತು!

ವಿಜಯ್ ವಿಕ್ರಂ ಗಂತೂ ಕಳ್ಳಕಾಕರೆ ಭಯವೇ ಇದ್ದಿತಿಲ್ಲ..ಇನ್ನು ಅವರ ಬಾಸ್ ಕ್ಯಾ|| ಖನ್ನಾ ಅವರನ್ನು ಅತ್ತಿತ್ತ ರೋಮಾಂಚಕ ಸಾಹಸಗಳಿಗೆ ಕಳಿಸುತ್ತಿದ್ದರೆ ಅದನ್ನು ಸ್ವಾಭಾವಿಕವಾಗಿಯೆ ಥ್ರಿಲ್ ಎಂದು ಭಾವಿಸಿ ಆಟದಲ್ಲಿ ಗೆಲ್ಲುವಂತೆ ಉತ್ಸಾಹದಲ್ಲಿ ತೊಡಗುತ್ತಿದ್ದರು…

ಒಮ್ಮೆ ಭಾನುವಾರ ಅವರಿಬ್ಬರೂ ಮನೆಯಲ್ಲಿರುವಾಗ, ಸಂಡೆ ಟೈಂಸ್ ಓದುತ್ತಾ ಮನೆ ವೆರಾಂಡಾದಲ್ಲಿ ಕುಳಿತಿರುವಾಗ ಟ್ರಿಣ್ ಟ್ರಿಣ್ ಎಂದು ಫೋನ್ ಹೊಡೆದುಕೊಂಡಿತು…

“ಯಾರಯ್ಯಾ ಇದು, ಥೋ, ಭಾನುವಾರಾನೂ ಬಿಡೋದಿಲ್ಲಾ ” ಅಂದುಕೊಂಡು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s


  • None
  • No comments yet

Categories

Archives

%d bloggers like this: